Current Date 10 Jun, 2026

‘I will Expose, Destroy Bigg Boss, ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸ್ರು ಬೇರೆ ಇಡು’ - ಲಾಯರ್ ಜಗದೀಶ್‌ ವಾರ್ನಿಂಗ್!

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿರುವ ಲಾಯರ್ ಜಗದೀಶ್‌ ಇದೀಗ ‘ಬಿಗ್ ಬಾಸ್’ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ‘ಬಿಗ್ ಬಾಸ್‌’ಗೇ ಲಾಯರ್ ಜಗದೀಶ್‌ ಧಮ್ಕಿ ಹಾಕಿದ್ದಾರೆ. ‘ನಾನು ಆಚೆ ಹೋಗಲಿ.. ಈ ‘ಬಿಗ್ ಬಾಸ್‌’ನ ನಾನು ಮ್ಯಾನಿಪ್ಯುಲೇಟ್‌ ಮಾಡಲಿಲ್ಲ ಅಂದ್ರೆ ನನ್ನ ಹೆಸರು ಜಗದೀಶ್‌ ಅಲ್ಲ. ನಾನು ‘ಬಿಗ್ ಬಾಸ್‌’ನ ಎಕ್ಸ್‌ಪೋಸ್ ಮಾಡ್ತೀನಿ. ನಿಮ್ಮ ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರು ಬೇರೆ ಇಡು. I will Destroy your program’’ ಅಂತ ಕ್ಯಾಮರಾ ಮುಂದೆ ನಿಂತು ಕೈ ತೋರಿಸಿ ಬೆದರಿಕೆ ಹಾಕಿದ್ದಾರೆ ಲಾಯರ್ ಜಗದೀಶ್‌.